ಮೌರ್ಯ ಸಾಮ್ರಜ್ಯದ ಸ್ಥಾಪಕ ಚಂದ್ರಗುಪ್ತ ಮೌರ್ಯ.ಸಾಮನ್ಯ ಕೌಟುಂಬಿಕ ಹಿನ್ನಲೆಯಿಂದ ಬಂದವನು ಎಂದು ಉಲ್ಲೇಖೀಸಿದ್ದಾರೆ. ಈ ಚಂದ್ರಗುಪ್ತ ಮೌರ್ಯನ ಮರಣದ ನಂತರ ಅವನ ಮಗನಾದ ಬಿಂದುಸಾರನು ಮಗಧ ಸಿಂಹಾಸನವನ್ನೇರಿದನು. ಗ್ರೀಕ್ ಬರಹಗಾರರು ಇವನನ್ನು 'ಅಮಿತ್ರಘಾತ್ರ'(ಶತ್ರುಗಳ ಸಂಹಾರಕ)ಎಂದು ಕರೆದಿದ್ದಾರೆ. ಆದರೆ ಬಿಂದುಸಾರನ ಶತ್ರುಗಳ ಬಗ್ಗೆಯಾಗಲಿ ಶತ್ರುಗಳನ್ನು ಸೋಲಿಸಿದ ಬಗ್ಗೆ ವಿವರಗಳು ಲಭ್ಯವಾಗಿಲ್ಲಾ. ಕೌಟಿಲ್ಯನು ಚಂದ್ರಗುಪ್ತನ ಮರಣಾನಂತರವೂ ಬದುಕ್ಕಿದ್ದು ಸ್ವಲ್ಪ ಕಾಲ ಬಿಂದುಸಾರನ ಆಮಾತ್ಯನಾಗಿದ್ದನು. ದಿವ್ಯಾವಧಾನದ ಪ್ರಕಾರ ಬಿಂದುಸಾರನ ಕಾಲದಲ್ಲಿ ವಾಯುವ್ಯ ಪ್ರಾಂತ್ಯವಾದ ತಕ್ಷಶಿಲೆಯಲ್ಲಿ ಪ್ರಜೆಗಳು ದಂಗೆಯೆದ್ದರು. ಆ ದಂಗೆಯನ್ನು ಆಡಗಿಸಲು ತನ್ನ ಮಗನಾದ ಅಶೋಕನನ್ನು ಆದರ ರಾಜ್ಯಪಾಲನಾಗಿ ನೇಮಿಸಿದನು. ಬಿಂದುಸಾರನ ಸಾಮ್ರಾಜ್ಯವು ಉತ್ತರ ಮತ್ತು ದಕ್ಷಿಣ ಭಾರತದ ಹೆಚ್ಚಿನ ಭಾಗಗಳನ್ನು ವ್ಯಾಪಿಸಿತು. == ಉಲ್ಲೇಖಗಳು ==